ಭವ್ಯಾ ಚೈತ್ರಾ ಮಾತಿನ ಚಕಮಕಿ ಬಿಗ್ ಬಾಸ್ ಮನೆಯಲ್ಲಿ ಗಲಾಟೆ ತೀವ್ರ


ಭವ್ಯಾ ಚೈತ್ರಾ ಮಾತಿನ ಚಕಮಕಿ ಬಿಗ್ ಬಾಸ್ ಮನೆಯಲ್ಲಿ ಗಲಾಟೆ ತೀವ್ರ ಚೈತ್ರಾ ಕುಂದಾಪುರ ಅವರ ವರ್ತನೆಗೆ ಬೇಸತ್ತಿರುವ ಬಿಗ್ ಬಾಸ್ ಮನೆಯಲ್ಲಿ, ಭವ್ಯಾ ಅವರು ಚೈತ್ರಾ ವಿರುದ್ಧ ತೀವ್ರ ಅಭಿಪ್ರಾಯ ವ್ಯಕ್ತಪಡಿಸಿದರು. ‘ತಲೆ ಸುತ್ತಿ ಬಂದು ಆಗಾಗ ಮನೆಯಿಂದ ಹೊರಗೆ ಹೋಗಿ, ಹೊರಗಿನ ವಿಚಾರವನ್ನು ಇಲ್ಲಿ ಚರ್ಚೆ ಮಾಡ್ತೀರಿ’ ಎಂದು ಚೈತ್ರಾಗೆ ತಿವಿದ ಭವ್ಯಾ, ನಾಮಿನೇಷನ್ ಪ್ರಕ್ರಿಯೆಯಲ್ಲಿ ಕೂಡ ಚೈತ್ರಾ ವಿರುದ್ಧ ಮಾತನಾಡಿದರು.
ಇದೇ ವೇಳೆ ತ್ರಿವಿಕ್ರಮ್ ಕೂಡ ಚೈತ್ರಾ ಅವರ ಶಿಶಿರ್ ಬಗ್ಗೆ ಅಸಭ್ಯ ಪದಗಳ ಆರೋಪವನ್ನು ಪ್ರಸ್ತಾಪಿಸಿದರು. ತ್ರಿವಿಕ್ರಮ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಚೈತ್ರಾ, ‘ನಾನೇನು ಅಸಭ್ಯವಾಗಿ ಹೇಳಿದ್ದರೆ ನನ್ನ ನಾಲಿಗೆ ಬಿದ್ದು ಹೋಗಲಿ’ ಎಂದರು. ಇದಕ್ಕೆ ತ್ರಿವಿಕ್ರಮ್, ‘ಖಂಡಿತಾ ಬಿದ್ದು ಹೋಗುತ್ತದೆ’ ಎಂದು ತಿರುಗೇಟು ನೀಡಿದರು.
ಭವ್ಯಾ, "ಚೈತ್ರಾ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಇರುವ ಯೋಗ್ಯತೆ ಇಲ್ಲ" ಎಂದು ವಾಗ್ದಾಳಿ ನಡೆಸಿ, ಮನೆಯ ಒಳಗೂ ಹೊರಗೂ ತಂತ್ರಗಾರಿಕೆ ಮಾಡುವುದನ್ನು ಖಂಡಿಸಿದರು. ಚೈತ್ರಾ-ಭವ್ಯಾ-ತ್ರಿವಿಕ್ರಮ್ ನಡುವಿನ ಈ ಮಾತಿನ ಚಕಮಕಿ ಮನೆಯಲ್ಲಿ ಮತ್ತಷ್ಟು ಕಿರಿಕ್ ಹುಟ್ಟಿಸಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
