ಭಾವಿ ಪತಿಯ ಜೊತೆ ಹೊಸ ಸಾಹಸಕ್ಕೆ ಕೈ ಹಾಕಿದ ರಂಜನಿ ರಾಘವನ್ – ನಂದಿಬೆಟ್ಟ ಏರಿದ ಪವರ್ ಕಪಲ್!


ಜನಪ್ರಿಯ ‘ಕನ್ನಡತಿ’ ಧಾರಾವಾಹಿಯ ಮೂಲಕ ಮನೆಮಾತಾದ ನಟಿ ರಂಜನಿ ರಾಘವನ್, ಈಗ ಹೊಸ ಸಾಹಸಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಧಾರಾವಾಹಿಯ ನಂತರ ಲಾಂಗ್ ಬ್ರೇಕ್ ತೆಗೆದುಕೊಂಡಿದ್ದ ರಂಜನಿ, ಭಾವಿ ಪತಿಯ ಜೊತೆ ನಂದಿ ಬೆಟ್ಟವನ್ನು ಓಡುತ್ತಾ ಏರಿ ಎಲ್ಲರ ಗಮನಸೆಳೆದಿದ್ದಾರೆ.
ತಮ್ಮ ಮೊದಲ ಹಿಲ್ಸ್ ರನ್ ಎಂದೇ ವೀಕ್ಷಿಸಿದ ಈ ಸಾಹಸಕ್ಕೆ ಸಂಬಂಧಿಸಿದ ವಿಡಿಯೋವನ್ನು ರಂಜನಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. “ಒಂದು ಕಾಲದಲ್ಲಿ ಸೂರ್ಯನ ಕಿರಣವನ್ನೇ ದೂರವಿಟ್ಟು ಬದುಕುತ್ತಿದ್ದೆ, ಈಗ ಸೂರ್ಯನ ಕಿರಣ ನನ್ನನ್ನು ಮುಟ್ಟುತ್ತಿದ್ದಾನೆ” ಎಂಬ ದಾರ್ಶನಿಕ ಮೆಸೆಜ್ ಕೂಡ ನೀಡಿದ್ದಾರೆ.
ಅವರು ಒಟ್ಟು 8 ಕಿಲೋಮೀಟರ್ ಓಡುತ್ತಾ ಬೆಟ್ಟ ಏರಿ, 1 ಗಂಟೆ 27 ನಿಮಿಷಗಳಲ್ಲಿ ಪೂರೈಸಿದ್ದು, ತಮ್ಮ ಫಿಟ್ನೆಸ್ ಪ್ರಯಾಣವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಕೊನೆಗೆ ಬಸ್ ನಲ್ಲಿ ಉಚಿತ ಪ್ರಯಾಣ ಮಾಡಿ, ತಂಪಾದ ಜ್ಯೂಸ್ ಕುಡಿದ ರಂಜನಿ, “ಇದು ನನ್ನ ಮೊದಲ ಬೆಟ್ಟದ ಓಟ – ನೀವೂ ಟ್ರೈ ಮಾಡಿ” ಎಂಬ ಸಂದೇಶವನ್ನೂ ನೀಡಿದ್ದಾರೆ. ರಂಜನಿ ರಾಘವನ್ ಅವರ ಈ ಸ್ಫೂರ್ತಿದಾಯಕ ಸಾಹಸ ಅಭಿಮಾನಿಗಳಲ್ಲಿ ಹೊಸ ಚೈತನ್ಯ ತುಂಬಿದೆ
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
