Back to Top

ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ರಕ್ಷಕ್ ಬುಲೆಟ್ ಪ್ರಪೋಸಲ್ – ರಮೋಲ್ ಕೆನ್ನೆಗೆ ಮುತ್ತು, ಮನಸೋತು ಗ್ರೀನ್ ಸಿಗ್ನಲ್!

SSTV Profile Logo SStv June 30, 2025
ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ರಕ್ಷಕ್ ಬುಲೆಟ್ ಪ್ರಪೋಸಲ್
ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ರಕ್ಷಕ್ ಬುಲೆಟ್ ಪ್ರಪೋಸಲ್

ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ ಸೀಸನ್ 2, ದಿನದಿಂದ ದಿನಕ್ಕೆ ಇಂಟರೆಸ್ಟಿಂಗ್ ಟ್ವಿಸ್ಟ್‌ಗಳಿಂದ ಪ್ರೇಕ್ಷಕರ ಮನರಂಜನೆಗೆ ನಿಲ್ಲದ ಪ್ರವಾಹವನ್ನೇ ತಂದಿದೆ. ಈ ವಾರದ ಎಪಿಸೋಡ್‌ನಲ್ಲಿ ಎಲ್ಲ ಬ್ಯಾಚುಲರ್ಸ್ ತಮ್ಮ ಮೆಂಟರ್‌ಗಳಿಗೆ ಪ್ರಪೋಸ್ ಮಾಡಬೇಕಾದ ಸವಾಲನ್ನು ಹೊಂದಿದ್ದರು. ಆದರೆ ಎಲ್ಲರಿಗಿಂತ ಹೆಚ್ಚು ಗಮನ ಸೆಳೆದದ್ದು ರಕ್ಷಕ್ ಬುಲೆಟ್ ಮತ್ತು ರಮೋಲ್ ನಡುವಿನ ಎಮೋಷನಲ್ ಪ್ರಪೋಸಲ್‌.

ಬಿಗ್ ಬಾಸ್ ಸೀಸನ್ 10 ಮೂಲಕ ಜನಪ್ರಿಯರಾಗಿರುವ ರಕ್ಷಕ್ ಬುಲೆಟ್, ಇದೀಗ ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ಹೊಸದೊಂದು ನೋಟದ ಪ್ರೇಮಕಥೆಯನ್ನು ಆರಂಭಿಸಿದ್ದಾರೆ. ರಮೋಲ್‌ ಎದುರು ನಿಂತು, ತನ್ನ ಹೃದಯದ ಮಾತುಗಳನ್ನು ಬಹಿರಂಗವಾಗಿ ಹೇಳಿದ ರಕ್ಷಕ್‌ ಉಂಗುರ ತೊಡಿಸಿ, ಕೆನ್ನೆ ಹಾಗೂ ಹಣೆಗೆ ಮುತ್ತು ಕೊಟ್ಟು ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.

“ನಾನು ಎಷ್ಟೇ ಶ್ರೀಮಂತರಾದರೂ, ನಿನ್ನ ಮುಂದೆ ನಾನು ಯಾವತ್ತೂ ತಲೆ ಬಗ್ಗಿಸಿಕೊಂಡಿರುತ್ತೇನೆ. ಈ ಪ್ರೀತಿಗೆ ನಾನು ಸದಾ ನಿಷ್ಠಾವಂತನಾಗಿರುತ್ತೇನೆ” ಎಂಬ ಅರ್ಥಪೂರ್ಣ ಮಾತುಗಳಿಂದ ಪ್ರಪೋಸ್ ಮಾಡಿದ ರಕ್ಷಕ್‌ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದಿದ್ದಾರೆ. ಅವನ ಪ್ರೀತಿಗೆ ಮನಸೋತ ರಮೋಲ್‌ ಕೇಳಿದ ಪ್ರಶ್ನೆ, “ನಿನ್ನ ಲೈಫ್ನಲ್ಲಿ ಹುಡುಗಿ ಎಷ್ಟು ಮುಖ್ಯ?” ಇದಕ್ಕೆ ರಕ್ಷಕ್ ನುಡಿದ ಮಾತು: “ನಮ್ಮ ಅಮ್ಮ ಎಷ್ಟು ಮುಖ್ಯನೋ, ನೀವು ಅಷ್ಟೇ ಇಂಪಾರ್ಟೆಂಟ್” ಎಂಬದ್ದು ಹೃದಯ ತಟ್ಟುವ ಉತ್ತರವಾಗಿತ್ತು.

ಇಷ್ಟೆಲ್ಲದರ ಬಳಿಕ, “ನೀನು ರಾಮನಾಥ್ ಆಗೋಕೆ ಇಷ್ಟ ಪಡ್ತೀಯಾ? ಆಕಾಶಾ? ಅಥವಾ ಬೇಬಿ?” ಎಂಬ ರಮೋಲ್ ಪ್ರಶ್ನೆಗೆ, “ನಾನು ನಿನ್ನ BABY ಆಗೋಕೆ ಇಷ್ಟ ಪಡ್ತೀನಿ” ಎಂಬ ಉತ್ತರದಿಂದ ಪ್ರೇಮಕಥೆಗೊಂದು ಪಕ್ಕಾ ಸೆಂಟಿಮೆಂಟ್ ಟಚ್ ನೀಡಿದರು ರಕ್ಷಕ್. ಇವರ ಪ್ರೀತಿಗೆ ಖುಷಿಪಟ್ಟ ರಮೋಲ್‌ ಕೂಡ “ನಾನು ನಿನ್ನ ಜೊತೆ ಇಡೀ ಜೀವನ ಇರಲು ಇಷ್ಟ ಪಡ್ತೀನಿ” ಎಂದು ಸ್ಪಷ್ಟವಾಗಿ ಗ್ರೀನ್ ಸಿಗ್ನಲ್ ನೀಡಿದ್ರು. ಈ ರೊಮ್ಯಾಂಟಿಕ್ ಕ್ಷಣವನ್ನು ನೋಡಿದ ನಟಿ ರಚಿತಾ ರಾಮ್ ಸೇರಿದಂತೆ ಎಲ್ಲಾ ಜಡ್ಜ್‌ಗಳು ಮತ್ತು ಪ್ರೇಕ್ಷಕರು ಫುಲ್ ಶಾಕ್ ಆಗಿದ್ದು, ಶೋಗೆ ಹೊಸ ಉತ್ಸಾಹ ಸಿಕ್ಕಿದೆ.