ಭರ್ಜರಿ ಬ್ಯಾಚುಲರ್ 2 ವಿನ್ನರ್ ಸುನೀಲ್ಗೆ ಸಿಕ್ಕ ಹಣ ಎಷ್ಟು..?; ಇಲ್ಲಿದೆ ಸುದ್ದಿ


ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಜುಲೈ 27 ರಂದು ಗ್ರಾಂಡ್ ಫಿನಾಲೆ ಮೂಲಕ ಅಂತ್ಯವಾಯಿತು. ಸುನೀಲ್ ಮತ್ತು ಅಮೃತಾ ಜೋಡಿ ಈ ಶೋನ ವಿಜೇತರೆನಿದು 15 ಲಕ್ಷ ರೂ. ನಗದು ಹಾಗೂ ಟ್ರೋಫಿ ಗೆದ್ದಿದ್ದಾರೆ.
ಶೋನಲ್ಲಿ 10 ಜೋಡಿಗಳು ಸ್ಪರ್ಧಿಸುತ್ತಿದ್ದು, ಪ್ರತಿ ಪುರುಷ ಸ್ಪರ್ಧಿಗೆ ಮಹಿಳಾ ಮೆಂಟರ್ ಇದ್ದರು. ಫಿನಾಲೆ ಎಪಿಸೋಡ್‌ನಲ್ಲಿ ಸ್ಪರ್ಧಿಗಳ ಎಲ್ಲ ಡ್ಯಾನ್ಸ್ ಪ್ರದರ್ಶನಗಳು ಪ್ರೇಕ್ಷಕರನ್ನು ರಂಜಿಸಿತು. ರವಿಚಂದ್ರನ್ ಹಾಗೂ ರಚಿತಾ ರಾಮ್ ಅವರು ಜಡ್ಜ್ ಆಗಿ ಕಾರ್ಯನಿರ್ವಹಿಸಿದರು.
ಡ್ರೋನ್ ಪ್ರತಾಪ್ ಮತ್ತು ಗಗನಾ ಜೋಡಿಗೆ 3 ಲಕ್ಷ ರೂ. ಸಿಕ್ಕಿದ್ದು, ಅದರಲ್ಲಿ ಅರ್ಧವನ್ನು ಗಗನಾಗೆ ನೀಡುವುದಾಗಿ ಪ್ರತಾಪ್ ಘೋಷಿಸಿದರು. ರಕ್ಷಕ್ ಮತ್ತು ರಮೋಲಾ ಜೋಡಿಗೆ 10 ಲಕ್ಷ ರೂ ಸಿಕ್ಕಿತು.
ವಿಜೇತನಾದ ಸುನೀಲ್, "ಶೋಗೆ ಬರೋದು ಸರಿಯಾಗಿತ್ತಾ ಎಂದು ಆಲೋಚನೆ ಇತ್ತು, ಆದರೆ ಈಗ ಟ್ರೋಫಿ ಹಿಡಿದಿರುವುದು ಗೌರವವಾಗಿದೆ," ಎಂದರು. ಈ ಮೂಲಕ 'ಭರ್ಜರಿ ಬ್ಯಾಚುಲರ್ಸ್ ಸೀಸನ್ 2' ಯಶಸ್ವಿಯಾಗಿ ತನ್ನ ಗಮ್ಯ ತಲುಪಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
