Back to Top

ʻಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2’ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ! ಯಾರು ಈ ಬಾರಿಗೆ ವಿನ್ನರ್?

SSTV Profile Logo SStv July 25, 2025
ʻಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2’ ಗ್ರ್ಯಾಂಡ್‌ ಫಿನಾಲೆಗೆ ಕೌಂಟ್‌ಡೌನ್‌ ಶುರು
ʻಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2’ ಗ್ರ್ಯಾಂಡ್‌ ಫಿನಾಲೆಗೆ ಕೌಂಟ್‌ಡೌನ್‌ ಶುರು

ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ʻಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2’ ಇದೀಗ ತನ್ನ ಗ್ರ್ಯಾಂಡ್ ಫಿನಾಲೆ ಹಂತ ತಲುಪಿದ್ದು, ಭಾನುವಾರ (ಜುಲೈ 27) ಸಂಜೆ 6 ಗಂಟೆಗೆ ಅದ್ಧೂರಿಯಾಗಿ ಪ್ರಸಾರವಾಗಲಿದೆ. ರವಿಚಂದ್ರನ್ ಹಾಗೂ ರಚಿತಾ ರಾಮ್‌ ಜಡ್ಜ್‌ಗಳಾಗಿ ಹಾಗೂ ನಿರಂಜನ್ ದೇಶಪಾಂಡೆ ನಿರೂಪಕರಾಗಿ ಶೋಗೆ ಪ್ರಾಣ ತುಂಬಿದರೆ, ಬ್ಯಾಚುಲರ್ಸ್‌ ಮತ್ತು ಏಂಜೆಲ್ಸ್‌ಗಳು ತಮ್ಮ ಸ್ಫೂರ್ತಿದಾಯಕ ಪ್ರದರ್ಶನದಿಂದ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ.

ಈ ಸೀಸನ್‌ನಲ್ಲಿ 10 ಬ್ಯಾಚುಲರ್ಸ್‌ ಮತ್ತು 10 ಏಂಜೆಲ್ಸ್‌ ವಿವಿಧ ಸುತ್ತುಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಅಂತಿಮ ಸುತ್ತಿನಲ್ಲಿ 10 ಜೋಡಿಗಳು ಸ್ಪರ್ಧಿಸುತ್ತಿದ್ದು, ಸುನೀಲಾ-ಅಮೃತಾ, ದರ್ಶನ್-ಅಪೇಕ್ಷಾ, ರಕ್ಷಕ್ ಬುಲೆಟ್-ರಮೋಲಾ, ಹುಲಿ ಕಾರ್ತಿಕ್-ಧನ್ಯ, ಭುವನೇಶ್-ಅನನ್ಯಾ ಸೇರಿದಂತೆ ಇನ್ನೂ ಹಲವು ಜೋಡಿಗಳು ತೀವ್ರ ಪೈಪೋಟಿ ನೀಡುತ್ತಿದ್ದಾರೆ.

ʻಭರ್ಜರಿ ಬ್ಯಾಚುಲರ್ಸ್‌’ ಶೋ ತನ್ನ ವಿಭಿನ್ನ ತಂತ್ರ, ಮನರಂಜನೆಯೊಡನೆ ಭಾವನಾತ್ಮಕವಾದ ಸಂಗತಿಗಳ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿದೆ. ಈಗ, ಯಾರಾಗ್ತಾರೆ ಈ ಬಾರಿಯ ʻಭರ್ಜರಿʼ ಜೋಡಿ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ ಈ ವಾರಾಂತ್ಯದಲ್ಲಿ!