Back to Top

ಅಯೋಗ್ಯ ಡೈರೆಕ್ಟರ್ ಮಹೇಶ್ ಕುಮಾರ್ ಅದ್ಧೂರಿ ಮದುವೆ – ಮೈಸೂರಿನ ಚೈತ್ರಾರೊಂದಿಗೆ ಹಸೆಮಣೆ

SSTV Profile Logo SStv July 2, 2025
ಅಯೋಗ್ಯ ಡೈರೆಕ್ಟರ್ ಮಹೇಶ್ ಕುಮಾರ್ ಅದ್ಧೂರಿ ಮದುವೆ
ಅಯೋಗ್ಯ ಡೈರೆಕ್ಟರ್ ಮಹೇಶ್ ಕುಮಾರ್ ಅದ್ಧೂರಿ ಮದುವೆ

ಸ್ಯಾಂಡಲ್‌ವುಡ್‌ನಲ್ಲಿ ‘ಅಯೋಗ್ಯ’ ಮತ್ತು ‘ಮದಗಜ’ ಸಿನಿಮಾಗಳ ಮೂಲಕ ಖ್ಯಾತಿ ಪಡೆದ ನಿರ್ದೇಶಕ ಮಹೇಶ್ ಕುಮಾರ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರು ಮೂಲದ ಚೈತ್ರಾ ಅವರೊಂದಿಗೆ ಸಂಭ್ರಮದಿಂದ ಮದುವೆಯಾಗಿದ್ದಾರೆ.

ಮೈಸೂರು ನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಇಬ್ಬರೂ ಸಾಂಪ್ರದಾಯಿಕ ರೀತಿಯಲ್ಲಿ ವರ–ವಧುಗಳಾಗಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಮನೆಯವರ ಮೆಚ್ಚಿಗೆ, ಕುಟುಂಬಸ್ಥರ ಸಮ್ಮುಖದಲ್ಲಿ ನಡೆದ ಈ ಮದುವೆಯಲ್ಲಿ ಗುರುಹಿರಿಯರು, ಆಪ್ತರು, ಸ್ನೇಹಿತರು ಭಾಗವಹಿಸಿ ನವಜೋಡಿಗೆ ಆಶೀರ್ವಾದ ಮಾಡಿದ್ದಾರೆ.

ವಧು ಚೈತ್ರಾ ಎಂ.ಎ ಎಕನಾಮಿಕ್ಸ್ ಪದವೀಧರೆ ಆಗಿದ್ದು, ಇದು ಅರೇಂಜ್ಡ್ ಮ್ಯಾರೇಜ್ ಆಗಿದೆ. ಮಹೇಶ್ ಕುಮಾರ್ ಸದ್ಯ 'ಅಯೋಗ್ಯ 2' ಚಿತ್ರದ ಚಿತ್ರೀಕರಣದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿದ್ದು, ಸಿನಿಮಾರಂಗದ ಸ್ನೇಹಿತರು ಹಾಗೂ ಅಭಿಮಾನಿಗಳು ನವಜೋಡಿಗೆ ಶುಭಾಶಯ ಕೋರುತ್ತಿದ್ದಾರೆ.