ಅಶ್ಲೀಲ ಕಾಮೆಂಟ್ ವಿಚಾರಕ್ಕೆ ಖಡಕ್ ಪ್ರತಿಕ್ರಿಯೆ ನೀಡಿದ ಅದಿತಿ ಪ್ರಭುದೇವ


ಸಾಮಾಜಿಕ ಜಾಲತಾಣದಲ್ಲಿ ನಟಿ ರಮ್ಯಾ ಅವರಿಗೆ ಅಶ್ಲೀಲ ಕಾಮೆಂಟ್ ಬಂದಿರುವ ಪ್ರಕರಣದ ಬೆನ್ನಲ್ಲೇ, ನಟಿ ಅದಿತಿ ಪ್ರಭುದೇವ ತಮ್ಮ ಖಡಕ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. “ಹುಚ್ಚರು ಮಾತ್ರ ಅನಾವಶ್ಯಕವಾಗಿ ಕಾಮೆಂಟ್ ಮಾಡ್ತಾರೆ. ಸ್ಟಾರ್‌ಗಳು ಎಲ್ಲರಿಗೂ ಸಪೋರ್ಟ್ ಮಾಡ್ತಾರೆ ಅಂತ ಅನ್ನಿಸುತ್ತದೆ” ಎಂದು ಅದಿತಿ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಫೇಕ್ ಅಕೌಂಟ್ ಮೂಲಕ ನಟ ನಟಿಯರ ವಿರುದ್ಧ ಕೀಳುಮಟ್ಟದ ಟೀಕೆ ಮಾಡುವ ಗೀಳು ಹೆಚ್ಚಾಗಿದೆ ಎಂದು ತಿಳಿಸಿರುವ ಅವರು, “ಇಂತಹವರನ್ನು ಇಗ್ನೋರ್ ಮಾಡೋದು ಉತ್ತಮ. ನನಗೆ ವೈಯಕ್ತಿಕವಾಗಿ ಈ ರೀತಿ ಅನುಭವವಾಗಿಲ್ಲ, ಆದರೆ ಕೆಲವರು ತಾವು ಸ್ಟಾರ್ ಅಭಿಮಾನಿಗಳು ಅಂತಾ ಫೇಕ್ ಅಕೌಂಟ್ ತೆಗೆದುಕೊಂಡು ತಕ್ಕೂ ಬಿಟ್ಟಾರು” ಎಂದಿದ್ದಾರೆ.
ಇತ್ತ ನಟಿ ರಮ್ಯಾ ಈ ಕುರಿತು ಕಾನೂನು ಹೋರಾಟ ಕೈಗೊಂಡಿದ್ದು, ಹಲವರು ಈ ಬಗ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜವಾಬ್ದಾರಿಯನ್ನು ಜನತೆ ಹಾಗೂ ಅಭಿಮಾನಿಗಳು ಅರಿಯಬೇಕೆಂಬುದು ಬಹುತೇಕ ಕಲಾವಿದರ ಅಭಿಪ್ರಾಯವಾಗಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
