Back to Top

ಅನುಶ್ರೀ ಮದುವೆ ವದಂತಿಗೆ ತಿರುಗೇಟು? "ಆಡ್ಕೊಳ್ಳೋ ಬಾಯಿಗೆ ಬೀಗ" ಪೋಸ್ಟ್ ವೈರಲ್!

SSTV Profile Logo SStv July 21, 2025
ಅಣ್ಣಾವ್ರ ಡೈಲಾಗ್‌ ಮೂಲಕ ಅನುಶ್ರೀ ಹಂಚಿದ ಸನ್ನಿವೇಶ
ಅಣ್ಣಾವ್ರ ಡೈಲಾಗ್‌ ಮೂಲಕ ಅನುಶ್ರೀ ಹಂಚಿದ ಸನ್ನಿವೇಶ

ಜನಪ್ರಿಯ ಟಿವಿ ನಿರೂಪಕಿ ಅನುಶ್ರೀ ಅವರ ಮದುವೆ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ, ಅವರು ಹಂಚಿಕೊಂಡಿರುವ ಒಂದು ಮರ್ಮಭರಿತ ಪೋಸ್ಟ್‌ ಫ್ಯಾನ್ಸ್‌ ಗಮನ ಸೆಳೆಯುತ್ತಿದೆ. “ಆಡ್ಕೊಳ್ಳೋ ಬಾಯಿಗೆ ಬೀಗ ಹಾಕೋದಕ್ಕೆ ಸಾಧ್ಯವಿಲ್ಲ” ಎಂಬ ಅಣ್ಣಾವ್ರ ಡೈಲಾಗ್‌ ಹೊಂದಿದ ವಿಡಿಯೋ ಹಂಚಿಕೊಂಡಿರುವ ಅನುಶ್ರೀ, ಏನೋ ಸಂದೇಶ ಕೊಡಲು ಪ್ರಯತ್ನಿಸುತ್ತಿದ್ದಾರೆಯಾ ಎಂಬ ಪ್ರಶ್ನೆಗಳು ಹುಟ್ಟಿವೆ.

ಅವಧಿಯಲ್ಲೇ, ಉದ್ಯಮಿ ರೋಷನ್ ಜೊತೆ ಅನುಶ್ರೀ ಮದುವೆ ಆಗುತ್ತಿರುವ ಸುದ್ದಿ ವೈರಲ್‌ ಆಗುತ್ತಿದೆ. ಆಗಸ್ಟ್ 28 ರಂದು ಬೆಂಗಳೂರುನಲ್ಲಿ ಗ್ರ್ಯಾಂಡ್ ಮದುವೆ ನಡೆಯಲಿದೆ ಎನ್ನಲಾಗುತ್ತಿದೆ. ಆದರೆ, ಇದುವರೆಗೆ ಅನುಶ್ರೀ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

ತಾವು ಕೇಳಿಕೊಳ್ಳದ ಗಾಸಿಪ್‌ಗಳ ಬಗ್ಗೆ ತೀವ್ರ ವಾಗ್ವಧಾ ನೀಡಿರುವ ಈ ಪೋಸ್ಟ್‌ ಹಿಂದಿನ ಅರ್ಥವೇನು ಎಂದು ಅಭಿಮಾನಿಗಳು ಕಮೆಂಟ್‌ ಮೂಲಕ ಪ್ರಶ್ನಿಸುತ್ತಿದ್ದಾರೆ. ತರುಣ್ ಸುಧೀರ್ ಸೇರಿದಂತೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅನುಶ್ರೀ ಈ ಬಗ್ಗೆ ಸ್ಪಷ್ಟನೆ ನೀಡುವ ನಿರೀಕ್ಷೆಯಿದೆ.

ಮೂಲತಃ ಮಂಗಳೂರು ಮೂಲದ ಅನುಶ್ರೀ, ಹಲವಾರು ಟಿವಿ ಶೋಗಳ ಮೂಲಕ ಕರ್ನಾಟಕದ ಮನೆಮಗಳು ಆಗಿದ್ದಾರೆ. ತಮ್ಮ ಶ್ರದ್ಧೆ, ಪ್ರತಿಭೆಯಿಂದ ಕಷ್ಟಗಳನ್ನು ಎದುರಿಸಿ, ಪ್ರೀತಿಗೆ ಪಾತ್ರರಾಗಿದ್ದಾರೆ.