ಆಂಕರ್ ಜಾಹ್ನವಿ ಮನೆಯಲ್ಲಿ 15ನೇ ವರ್ಷದ ಮಂಗಳಗೌರಿ ಪೂಜೆ – ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್!


ನಟಿಯು ಹಾಗೂ ಟಿವಿ ಆಂಕರ್ ಆಗಿರುವ ಜಾಹ್ನವಿ, ಈ ವರ್ಷದ ಶ್ರಾವಣ ಮಾಸದಲ್ಲಿ ತಮ್ಮ ಮನೆಯಲ್ಲಿ 15ನೇ ವರ್ಷದ ಮಂಗಳಗೌರಿ ಪೂಜೆಯನ್ನು ಸಂಪ್ರದಾಯಬದ್ಧವಾಗಿ ನೆರವೇರಿಸಿದ್ದಾರೆ. ದೇವಿ ಕೃಪೆಯಿಂದ ಕುಟುಂಬದಲ್ಲಿ ಶಾಂತಿ, ಸಮೃದ್ಧಿ ಇರಲೆಂದು ಪ್ರಾರ್ಥನೆ ಸಲ್ಲಿಸಿದ್ದಾರೆ.
‘ನನ್ನಮ್ಮ ಸೂಪರ್ ಸ್ಟಾರ್’ ಹಾಗೂ ‘ಗಿಚ್ಚಿ ಗಿಲಿಗಿಲಿ’ ಕಾರ್ಯಕ್ರಮಗಳಿಂದ ಮನೆಮಾತಾದ ಜಾಹ್ನವಿ, ‘ಗಿಚ್ಚಿ ಗಿಲಿಗಿಲಿ’ಯಲ್ಲಿ ರನ್ನರ್ ಅಪ್ ಆಗಿದ್ದರು. ಬಳಿಕ ‘ಅಧಿಪತ್ರ’ ಸಿನಿಮಾದಲ್ಲಿ ಬಿಗ್ ಬಾಸ್ ವಿಜೇತೆ ರೂಪೇಶ್ ಶೆಟ್ಟಿ ಜೊತೆ ನಾಯಕಿಯಾಗಿ ಅಭಿನಯಿಸಿದರು.
ಕಲಾಜಗತ್ತಿನಲ್ಲಿ ಸಕ್ರಿಯರಾಗಿರುವ ಜಾಹ್ನವಿ ಭಕ್ತಿಯನ್ನೂ ಕೂಡ ಜತೆಯಾಗಿ ಮುಂದುವರೆಸುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಮಂಗಳಗೌರಿ ವ್ರತ ಮಾಡುತ್ತಾ ಬಂದಿರುವ ಅವರು, ಈ ಬಾರಿ ತಮ್ಮ ಬೆಂಗಳೂರಿನ ಸ್ವಂತ ನಿವಾಸದಲ್ಲಿ ಭಕ್ತಿಪೂರ್ವಕವಾಗಿ ಪೂಜೆಯನ್ನು ನೆರವೇರಿಸಿದ್ದಾರೆ. ಈ ಪವಿತ್ರ ಕ್ಷಣಗಳ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ. ಜಾಹ್ನವಿ ಮೂಲತಃ ಸಕಲೇಶಪುರದವರು. ಅವರ ಪುತ್ರ ಗ್ರಂಥ್ ಇದೀಗ ಎಂಟನೇ ತರಗತಿಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
