Back to Top

ಆ್ಯಂಕರ್ ಅನುಶ್ರೀ ಮದುವೆ ಫಿಕ್ಸ್? ಕೊಡಗಿನ ರೋಷನ್ ಜೊತೆ ಫೋಟೋ ವೈರಲ್! ಇಲ್ಲಿದೆ ರೋಷನ್ ಫೋಟೋ

SSTV Profile Logo SStv July 18, 2025
ಆ್ಯಂಕರ್ ಅನುಶ್ರೀ ಮದುವೆ ಫಿಕ್ಸ್
ಆ್ಯಂಕರ್ ಅನುಶ್ರೀ ಮದುವೆ ಫಿಕ್ಸ್

ಜನಪ್ರಿಯ ಟಿವಿ ಆ್ಯಂಕರ್ ಹಾಗೂ ನಟಿ ಅನುಶ್ರೀ ಅವರ ಮದುವೆ ಕುರಿತ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಕೊಡಗು ಮೂಲದ ರೋಷನ್ ಎಂಬ ಯುವಕನೊಂದಿಗೆ ಅವರು ಆಗಸ್ಟ್ 28ರಂದು ವಿವಾಹವಾಗಲಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಅನೇಕ ಫೋಟೋಗಳು ವೈರಲ್ ಆಗಿದ್ದು, ಅದರಲ್ಲಿ ಅನುಶ್ರೀ ಹಾಗೂ ರೋಷನ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಅವರಿಬ್ಬರ ಮದುವೆ ಸುದ್ದಿ ಕಡೆ ಇಂಗಿತ ನೀಡುತ್ತಿವೆ. ಕೆಲ ಫ್ಯಾನ್ ಪೇಜ್‌ಗಳಲ್ಲಿ ಈ ಫೋಟೋ ಹರಿದಾಡುತ್ತಿರುವುದು ಅಭಿಮಾನಿಗಳಲ್ಲಿ ಸಂಭ್ರಮ ಹುಟ್ಟಿಸಿದೆ.

ಹಾಗೆಯೇ, ರೋಷನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಅನುಶ್ರೀ ಅವರ ಇನ್‌ಸ್ಟಾಗ್ರಾಂ ಫಾಲೋ ಲಿಸ್ಟ್ನಲ್ಲೂ ಇದ್ದಾರೆ. ಆದರೆ, ಇನ್ನೂ ಇಬ್ಬರೂ ಅಧಿಕೃತವಾಗಿ ಈ ವಿಷಯವನ್ನು ದೃಢಪಡಿಸಿಲ್ಲ.

ಅನುಶ್ರೀ ಕೊನೆಯದಾಗಿ ಜೀ ಕನ್ನಡದ ಸರಿಗಮಪ ಕಾರ್ಯಕ್ರಮದಲ್ಲಿ ಆ್ಯಂಕರ್ ಆಗಿ ಕಾಣಿಸಿಕೊಂಡಿದ್ದರು. ಸ್ಕ್ರಿಪ್ಟ್ ಇಲ್ಲದೆ ಕಾರ್ಯಕ್ರಮ ನಿರೂಪಿಸುವ ಅವರ ಶೈಲಿ ಹಾಗೂ ಆತ್ಮವಿಶ್ವಾಸವು ಇವರಿಗೆ ವಿಶಿಷ್ಟ ಸ್ಥಾನಮಾನವನ್ನು ನೀಡಿದೆ. ಇದೀಗ ಮದುವೆ ಸುದ್ದಿಯ ಕುರಿತು ಅವರ ಅಧಿಕೃತ ಘೋಷಣೆಗೆ ಅಭಿಮಾನಿಗಳು ಕಾದು ಕುಳಿತಿದ್ದಾರೆ.