ಅಟ್ಲಿ ನಿರ್ದೇಶನದ ಹೊಸ ಸಿನಿಮಾಗೆ ಮತ್ತೆ ಒಂದಾದ 'ಪುಷ್ಪಾ' ಜೋಡಿ


ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಪ್ರಸಿದ್ಧ ನಿರ್ದೇಶಕ ಅಟ್ಲಿ ಕಾಂಬಿನೇಷನ್‌ನಲ್ಲಿ ಬರಲಿರುವ ಬಹುಕೋಟಿ ಬಜೆಟ್ ಚಿತ್ರ ಈಗಾಗಲೇ ದೊಡ್ಡ ಮಟ್ಟದಲ್ಲಿ ಕುತೂಹಲ ಮೂಡಿಸಿದೆ. "ಎಎ26-ಎ6" ಹೆಸರಿನ ಅನಾಮಧೇಯ ಈ ಚಿತ್ರ, ದಿನದಿಂದ ದಿನಕ್ಕೆ ಹೊಸ ವಿಶೇಷತೆಗಳಿಂದ ಗಾಳಿ ಸೃಷ್ಟಿಸುತ್ತಿದ್ದು, ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ನಿರ್ಮಾಣವಾಗಿದೆ.
ಈ ಚಿತ್ರ ಸೂಪರ್ ಮ್ಯಾನ್ ಕಾನ್ಸೆಪ್ಟ್ ಹೊಂದಿದ್ದು, ಭಾರತೀಯ ಚಿತ್ರರಂಗದಲ್ಲಿ ವಿಭಿನ್ನ ಪ್ರಯೋಗವನ್ನೇ ಮಾಡುತ್ತಿದೆ. ಸಿನಿಮಾದ ಫಸ್ಟ್ ಗ್ಲಿಂಪ್ಸ್ ಬಿಡುಗಡೆಯಾಗುತ್ತಿದ್ದಂತೆಯೇ ಅಲ್ಲು ಅಭಿಮಾನಿಗಳು ಭಾರೀ ಸಂತೋಷ ವ್ಯಕ್ತಪಡಿಸಿದ್ದರು. ಈಗ, ಈ ಚಿತ್ರದಲ್ಲಿ 'ಪುಷ್ಪಾ' ಸಿನಿಮಾದ ಹಿಟ್ ಜೋಡಿ ಅಲ್ಲು ಅರ್ಜುನ್–ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಒಂದಾಗುತ್ತಿದ್ದಾರೆ ಎಂಬ ಸುದ್ದಿಯೇ ಹೊಸ ಸಂಚಲನ ಸೃಷ್ಟಿಸಿದೆ. ಚಿತ್ರತಂಡದ ಪ್ಲ್ಯಾನ್ ಪ್ರಕಾರ, ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ಮೃಣಾಲ್ ಠಾಕೂರ್, ಜಾನವಿ ಕಪೂರ್, ಹಾಗೂ ರಶ್ಮಿಕಾ ಮಂದಣ್ಣ ಈ ನಾಲ್ವರು ನಟಿಯರನ್ನು ಒಂದೇ ಚಿತ್ರದಲ್ಲಿ ಕಾಣಿಸಲು ಯೋಜನೆ ಸಿದ್ಧವಾಗಿದೆ. ಇದೊಂದು 'ಡ್ರೀಮ್ ಕಾಸ್ಟ್' ಎಂಬಂತಾಗಿದೆ.
'ಜವಾನ್'ದ ಯಶಸ್ಸಿನ ಬಳಿಕ ಅಟ್ಲಿಯಿಂದ ಮತ್ತೊಂದು ಬಿಗ್ ಎಂಟರ್‌ಟೈನರ್ ಬಾಲಿವುಡ್‌ಗೆ ಶಾರುಖ್ ಖಾನ್ ಮೂಲಕ ಬಿಗ್ ಬ್ರೇಕ್ ಕೊಟ್ಟ 'ಜವಾನ್' ಚಿತ್ರದ ನಿರ್ದೇಶಕ ಅಟ್ಲಿ, ಈಗ ಸೌತ್‌ನ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಜೊತೆ ತೆರೆ ಹಂಚಿಕೊಂಡು ಮತ್ತೊಂದು ವಿಭಿನ್ನ ಪ್ರಯೋಗಕ್ಕೆ ಸಜ್ಜಾಗಿದ್ದಾರೆ. ಅವರ ನಿರ್ದೇಶನ ಶೈಲಿ ಮತ್ತು ಐಕಾನ್ ಸ್ಟಾರ್‌ನ ವಿಭಿನ್ನ ಲುಕ್ ಅಭಿಮಾನಿಗಳಿಗೆ ಹೊಸ ತಾಜಾ ಅನುಭವ ನೀಡಲಿದೆ ಎಂಬ ನಿರೀಕ್ಷೆ ಇದೆ.
ಈ ಸಿನಿಮಾದ ಬಗ್ಗೆ ಪ್ರತಿದಿನವೂ ಹೊಸ ಸುದ್ದಿಗಳು ಹೊರಬರುತ್ತಿದ್ದು, ಸ್ಟಾರ್‌ಕಾಸ್ಟ್ ಬೃಹತ್ ಆಗುತ್ತಿರುವುದು ಸ್ಪಷ್ಟ. ಚಿತ್ರದ ಟೀಟಲ್, ಮತ್ತಷ್ಟು ನಟರು, ಬಿಡುಗಡೆ ದಿನಾಂಕ ಎಲ್ಲದರ ಮೇಲೂ ಈಗಾಗಲೇ ವೀಕ್ಷಕರ ಕಣ್ಣು ಹಾಯಿಸಿದ್ದು, 'ಪುಷ್ಪಾ'ದ ಜೋಡಿಗೆ ಮತ್ತೆ ಭೇಟಿಯಾಗುವ ಅವಕಾಶದಿಂದಾಗಿ ಇನ್ನಷ್ಟು ಕುತೂಹಲ ಸೃಷ್ಟಿಯಾಗಿದೆ. ಇನ್ನು ಮುಂದೆ ಈ ಬೃಹತ್ ಸಿನಿಮಾದ ಬಗ್ಗೆ ಮತ್ತಷ್ಟು ಅಪ್ಡೇಟ್ಸ್ ನಿರೀಕ್ಷೆಯಲ್ಲಿದ್ದು, ಅಭಿಮಾನಿಗಳು ಕಾದು ಕೂತಿದ್ದಾರೆ ಈ ಚಿತ್ರ ಏನು ಹೊಸ ಬೆಳಕು ತರುತ್ತದೆ ಎಂದು!
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
