ಐಶ್ವರ್ಯ ಸಿಂಧೋಗಿಗೆ ಶಿಶಿರ್ ಶಾಸ್ತ್ರಿಯಿಂದ ಸಿಹಿ ಸಂದೇಶ – ಲವ್‌ನಲ್ಲಿ ಬಿದ್ರಾ ಬಿಗ್ ಬಾಸ್ ಜೋಡಿ?


ಸ್ಯಾಂಡಲ್‌ವುಡ್ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಐಶ್ವರ್ಯ ಸಿಂಧೋಗಿಗೆ ಆ.5 ರಂದು ಜನ್ಮದಿನ. ಈ ವಿಶೇಷ ದಿನದಂದು ಅವರ ಬಿಗ್ ಬಾಸ್ ಗೆಳೆಯ ಶಿಶಿರ್ ಶಾಸ್ತ್ರಿ ಒಂದು ನುಡಿಮುತ್ತುಗಳ ಪೋಸ್ಟ್ ಹಾಕಿದ್ದು, ಅಭಿಮಾನಿಗಳಲ್ಲಿ ಹೊಸ ಕುತೂಹಲ ಹುಟ್ಟಿಸಿದೆ.
“Happiest birthday to the most soulful, beautiful and the sweetest person! You deserve all the happiness in the world. Thumba kushiyagiru” ಎಂಬ ಇಂಗ್ಲಿಷ್ ವಿಶ್ ಜೊತೆಗೆ, ಇಬ್ಬರ ಕ್ಯೂಟ್ ಫೋಟೋಗಳನ್ನು ಶಿಶಿರ್ ತಮ್ಮ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಕನ್ನಡದಲ್ಲಿ ಅರ್ಥ– ಅತ್ಯಂತ ಸುಂದರ ಮತ್ತು ಸಿಹಿಯಾದ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು. ನೀವು ಜಗತ್ತಿನ ಎಲ್ಲಾ ಸಂತೋಷಕ್ಕೂ ಅರ್ಹರು. ತುಂಬಾ ಖುಷಿಯಾಗಿರಿ.
ಬಿಗ್ ಬಾಸ್ ಮನೆಯಲ್ಲಿ ಈ ಜೋಡಿಯ ಸ್ನೇಹವೇ ಟ್ರೆಂಡಿಂಗ್ ಆಗಿತ್ತು. ಮನೆಯಿಂದ ಹೊರಬಂದ ನಂತರವೂ ಇವರ ಸ್ನೇಹ ಹತ್ತಿರವಾಗುತ್ತಲೇ ಇದೆ. ಜೊತೆಯಲ್ಲಿ ಫೋಟೋ ಶೂಟ್, ಮೆಮೊರೆಬಲ್ ಕ್ಷಣಗಳ ಹಂಚಿಕೆ ಎಲ್ಲವೂ ನೆಟ್ಟಿಗರಲ್ಲಿ ಲವ್ ಅನುಮಾನ ಎಬ್ಬಿಸುತ್ತಿದೆ.
ಆದರೂ ಈ ಜೋಡಿ ತನ್ನ ಲವ್ ಬಾಂಧವ್ಯವನ್ನು ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಆದರೆ, ಇತ್ತೀಚಿನ ಬೆಳವಣಿಗೆಗಳಿಂದಾಗಿ "ಈ ಜೋಡಿಯ ಮಧ್ಯೆ ಏನೋ ಇದೆ!" ಅನ್ನೋ ಮಾತು ಮತ್ತೆ ಮತ್ತೆ ಕೇಳಿಬರುತ್ತಿದೆ.
Trending News
ಹೆಚ್ಚು ನೋಡಿವಿಷ್ಣುವರ್ಧನ್ ಸಿನಿಮಾಗೆ ಡೈರೆಕ್ಷನ್ ಕೊಡಬೇಕಿತ್ತಾ ರಮೇಶ್ ಅರವಿಂದ್? ಮಿಸ್ ಆದ ಆ ಅಪರೂಪದ ಅವಕಾಶ!

ಕಾಂತಾರಕ್ಕೆ ಕೈಜೋಡಿಸಿದ ಗಾಯಕ ದಿಲ್ಜಿತ್ ಸಿಂಗ್: ರಿಷಬ್ ಶೆಟ್ಟಿ ನಿಜಕ್ಕೂ ಮಾಸ್ಟರ್ಪೀಸ್ ಎಂದ ಸಿಂಗರ್
