Back to Top

ಐಶ್ವರ್ಯ ಸಿಂಧೋಗಿಗೆ ಅದ್ಧೂರಿ ಬರ್ತ್‌ಡೇ ಸೆಲೆಬ್ರೇಷನ್: ಸ್ನೇಹಿತರಿಂದ ಸರ್ಪ್ರೈಸ್ ಪಾರ್ಟಿ!

SSTV Profile Logo SStv August 6, 2025
ಐಶ್ವರ್ಯ ಸಿಂಧೋಗಿಗೆ ಅದ್ಧೂರಿ ಬರ್ತ್‌ಡೇ ಸೆಲೆಬ್ರೇಷನ್
ಐಶ್ವರ್ಯ ಸಿಂಧೋಗಿಗೆ ಅದ್ಧೂರಿ ಬರ್ತ್‌ಡೇ ಸೆಲೆಬ್ರೇಷನ್

ಬಿಗ್‌ಬಾಸ್ ಸೀಸನ್ 11ರ ಮೂಲಕ ಮನೆಮಗಳು ಎಂಬ ಪಾಪ್ಯುಲಾರಿಟಿ ಗಳಿಸಿದ ನಟಿ ಐಶ್ವರ್ಯ ಸಿಂಧೋಗಿ, ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಗೆಳೆಯರಾದ ಶಿಶರ್ ಶಾಸ್ತ್ರಿ, ಮೋಕ್ಷಿತಾ ಪೈ, ಧರ್ಮಕೀರ್ತಿ ರಾಜ್ ಮತ್ತು ಬಿಗ್‌ಬಾಸ್ 10 ಸ್ಪರ್ಧಿ ನೀತು ವನಜಾಕ್ಷಿ ಈ ಸೆಲೆಬ್ರೇಷನ್‌ಗೆ ಹಾಜರಿದ್ದರು.

ತಂದೆಯ ಕಳೆದುಕೊಂಡ ನೋವು ಇದ್ದರೂ, ಬಿಗ್‌ಬಾಸ್ ಮನೆಯ ಬೆಂಬಲದಿಂದ ಎಮೋಶನಲ್ ಕನೆಕ್ಷನ್ ಹೊಂದಿದ್ದ ಐಶ್ವರ್ಯ, ಈಗ ‘ನಿನ್ನ ಜೊತೆ ನನ್ನ ಕಥೆ’ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

ಹುಟ್ಟುಹಬ್ಬದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದಿದೆ.