Back to Top

'ಮಾನಸಿಕವಾಗಿ ಕುಗ್ಗಿಸೋಕೆ ನೋಡಿದ್ರೆ ಕುಗ್ಗೋ ಮಗಳೇ ಅಲ್ಲ ನಾನು' ಐಶ್ವರ್ಯಾ ಆರ್ಭಟಕ್ಕೆ ಮಂಜು ಗಪ್‌ಚುಪ್‌

SSTV Profile Logo SStv December 4, 2024
ಐಶ್ವರ್ಯಾ ಆರ್ಭಟಕ್ಕೆ ಮಂಜು ಗಪ್‌ಚುಪ್‌
ಐಶ್ವರ್ಯಾ ಆರ್ಭಟಕ್ಕೆ ಮಂಜು ಗಪ್‌ಚುಪ್‌
'ಮಾನಸಿಕವಾಗಿ ಕುಗ್ಗಿಸೋಕೆ ನೋಡಿದ್ರೆ ಕುಗ್ಗೋ ಮಗಳೇ ಅಲ್ಲ ನಾನು' ಐಶ್ವರ್ಯಾ ಆರ್ಭಟಕ್ಕೆ ಮಂಜು ಗಪ್‌ಚುಪ್‌ ಬಿಗ್ ಬಾಸ್ ಕನ್ನಡ ಸೀಸನ್ 11ನಲ್ಲಿ, ನಾಮಿನೇಷನ್ ಟಾಸ್ಕ್ ಗಲಾಟೆಗೆ ಕಾರಣವಾಗಿದೆ. ಟಾಸ್ಕ್ ಪ್ರಕಾರ, ಯೋಗ್ಯತೆಯಿಲ್ಲದ ಸ್ಪರ್ಧಿಗಳನ್ನು ಆರಿಸಿ, ಬೆನ್ನಿಗೆ ಚೂರಿ ಚುಚ್ಚಬೇಕಿತ್ತು. ಈ ವೇಳೆ ಮಂಜು ಅವರು ಬಹುತೇಕ ಸ್ಪರ್ಧಿಗಳ ಟಾರ್ಗೆಟ್ ಆಗಿದ್ದು, 8 ಚೂರಿ ಚುಚ್ಚಲಾಗಿತ್ತು. ಐಶ್ವರ್ಯ, ಮಂಜು ಅವರ ಬೆನ್ನಿಗೆ ಚೂರಿ ಚುಚ್ಚಿದ ಕಾರಣಕ್ಕೆ, ಅವರಿಬ್ಬರ ನಡುವೆ ವಾಗ್ವಾದ ಉಂಟಾಯಿತು. ಐಶ್ವರ್ಯ, “ನೀವು ಮಾನಸಿಕವಾಗಿ ಕುಗ್ಗಿಸಲು ಪ್ರಯತ್ನಿಸಿದರೂ ನಾನು ಅಷ್ಟು ಸುಲಭದಲ್ಲಿ ಕುಗ್ಗುವುದಿಲ್ಲ” ಎಂದು ಮಂಜುವಿಗೆ ತಿರುಗೇಟು ನೀಡಿದರು. ಇದಕ್ಕೆ ಮಂಜು ಅವರ ಪ್ರತಿಕ್ರಿಯೆ, ವೀಕ್ಷಕರ ಗಮನ ಸೆಳೆಯುವಂತಿತ್ತು. ಈ ಗಲಾಟೆಯ ನಿಜವಾದ ಕಾರಣ ಹಾಗೂ ಇದರ ಮುಂದಿನ ತಿರುವುಗಳ ಬಗ್ಗೆ ಇವತ್ತಿನ ಎಪಿಸೋಡ್ನಲ್ಲಿ ತಿಳಿಯಲಿದೆ. ಸ್ಪರ್ಧಿಗಳ ನಡುವೆ ನಡೆಯುತ್ತಿರುವ ಈ ವಾಗ್ಯುದ್ಧದಿಂದ ಮನೆಯಲ್ಲಿ ಮತ್ತಷ್ಟು ತೀವ್ರತೆ ಏರಿಕೆಯಾದಂತಿದೆ.