3 ಕೋಟಿ ಬೆಲೆಯ ಲೆಕ್ಸಸ್ ಖರೀದಿ ಮಾಡಿದ ಯಶ್ – ಐಶಾರಾಮಿ ಜೀವನಶೈಲಿಗೆ ಮತ್ತೊಂದು ಜೋಡಣೆ


ಪ್ಯಾನ್ ಇಂಡಿಯಾ ಸ್ಟಾರ್ ಯಶ್, ಇದೀಗ ತಮ್ಮ ಐಶಾರಾಮಿ ಕಾರು ಸಂಗ್ರಹಕ್ಕೆ ಮತ್ತೊಂದು ಸಿಂಹದಂತ ಕಾರು ಸೇರಿಸಿಕೊಂಡಿದ್ದಾರೆ. ಮೊತ್ತ 3 ಕೋಟಿ ಮೌಲ್ಯದ ಲೆಕ್ಸಸ್ LM 350h 4S Ultra Luxury ಕಾರು ಖರೀದಿ ಮಾಡಿದ ಯಶ್, ಈ ಬಾರಿ ವಿಶೇಷ ನಂಬರ್‌ಗೂ ಆದ್ಯತೆ ನೀಡಿದ್ದಾರೆ – 8055 (BOSS).
ಸಿನಿಮಾ ಚಿತ್ರೀಕರಣಕ್ಕಾಗಿ ಮುಂಬೈನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿರುವ ಯಶ್, ಅಲ್ಲಿನ ಓಡಾಟಕ್ಕಾಗಿ ಈ ಲಗ್ಜುರಿ ಕಾರನ್ನು ಖರೀದಿಸಿದ್ದು, ನಂಬರ್ MH47CB8055 ಇದು ಅವರ ವ್ಯಕ್ತಿತ್ವದ ಬಾಸ್ ಇಮೇಜ್‌ಗೆ ಪೂರಕವಾಗಿದೆ. ಈ 8055 ನಂಬರ್‌ನ್ನು ಪಡೆಯಲು ವಿಶೇಷವಾಗಿ ಆರ್‌ಟಿಒಗೆ ಲಕ್ಷಾಂತರ ಹಣ ಪಾವತಿಸಲಾಗಿದೆ ಎನ್ನಲಾಗಿದೆ.
ಈ ಕಾರು ಎಲ್ಲಾ ರೀತಿಯಿಂದಲೂ ಐಶಾರಾಮಿ ಅನುಭವವನ್ನು ನೀಡುತ್ತದೆ – ಹೀಟೆಡ್ ಮತ್ತು ವೆಂಟಿಲೇಟೆಡ್ ರಿಕ್ಲೈನರ್ ಸೀಟುಗಳು, ಮಸಾಜರ್‌ಗಳು, ಪ್ರತ್ಯೇಕ ಎಂಟರ್ಟೈನ್‌ಮೆಂಟ್ ಸ್ಕ್ರೀನ್, ಮಿನಿ ಫ್ರಿಡ್ಜ್, ಆಟೋಮೇಟೆಡ್ ಡೋರ್ ಮತ್ತು ಹೈಬ್ರಿಡ್ ಎಂಜಿನ್ ವ್ಯವಸ್ಥೆ ಇದರಲ್ಲಿ ಸೇರಿವೆ. ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ 'ಕಂಫರ್ಟ್ ಕಾರು'ಗಳಲ್ಲಿ ಇದೊಂದು. ಯಶ್ ಈ ಕಾರನ್ನು ಅವರ ನಿರ್ಮಾಣ ಸಂಸ್ಥೆ ‘ಮಾನ್‌ಸ್ಟರ್ ಮೈಂಡ್ಸ್’ ಹೆಸರಿನಲ್ಲಿ ನೋಂದಾಯಿಸಿದ್ದಾರೆ. ಯಶ್‌ರ ಇತರ ಕಾರುಗಳಲ್ಲಿಯೂ ಇದೇ 8055 ನಂಬರ್ ಇದೆ ಎನ್ನುವುದು ಅವರ ಪ್ರೀತಿ ಮತ್ತು ನಿರ್ದಿಷ್ಟತೆ ಅರ್ಥಮಾಡಿಕೊಳ್ಳಲು ಸಾಕ್ಷಿ.
‘ಕೆಜಿಎಫ್’ ಬಳಿಕ ಯಶ್ ತಮ್ಮ ಖ್ಯಾತಿಯನ್ನು ಮಾತ್ರವಲ್ಲ, ವೈಭೋಗದ ಜೀವನಶೈಲಿಯನ್ನೂ ಹದವಾಗಿ ನಿರ್ವಹಿಸುತ್ತಿದ್ದಾರೆ. ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಚಿತ್ರದ ಶೂಟಿಂಗ್ ಮುಗಿಸಿ ಅಮೆರಿಕ ಪ್ರವಾಸದಲ್ಲಿರುವ ಅವರು, ಇದೀಗ ಮತ್ತೆ ತಮ್ಮ ವೈಭೋಗದ ಸಂಗ್ರಹಕ್ಕೆ ಹೊಸ ಶೋಭೆ ನೀಡಿದ್ದಾರೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
