Back to Top

ಬಿಗ್ ಬಾಸ್ ಕನ್ನಡ 11 10ನೇ ವಾರದ ಕ್ಯಾಪ್ಟನ್ ಧನರಾಜ್ ಆಚಾರ್ಯ

SSTV Profile Logo SStv November 30, 2024
10ನೇ ವಾರದ ಕ್ಯಾಪ್ಟನ್ ಧನರಾಜ್ ಆಚಾರ್ಯ
10ನೇ ವಾರದ ಕ್ಯಾಪ್ಟನ್ ಧನರಾಜ್ ಆಚಾರ್ಯ
ಬಿಗ್ ಬಾಸ್ ಕನ್ನಡ 11 10ನೇ ವಾರದ ಕ್ಯಾಪ್ಟನ್ ಧನರಾಜ್ ಆಚಾರ್ಯ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 60ನೇ ದಿನಕ್ಕೆ ಕಾಲಿಟ್ಟಿದ್ದು, ಸ್ಪರ್ಧಿಗಳಿಗೆ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಕಠಿಣ ಹೋರಾಟ ಎದುರಾಯಿತು. ಈ ವಾರದ ಟಾಸ್ಕ್‌ನಲ್ಲಿ ಮಹಾರಾಜ ಮಂಜಣ್ಣ ಹಾಗೂ ಯುವರಾಣಿ ಮೋಕ್ಷಿತಾ ತಂಡಗಳ ನಡುವೆ ತೀವ್ರ ಸ್ಪರ್ಧೆ ನಡೆಯಿತು. ಕ್ಯಾಪ್ಟನ್ಸಿ ರೇಸ್‌ಗಾಗಿ ಧನರಾಜ್, ಗೋಲ್ಡ್ ಸುರೇಶ್, ಮಂಜು, ಐಶ್ವರ್ಯ, ಭವ್ಯಾ ಮತ್ತು ಗೌತಮಿ ಅಂತಿಮ ಸ್ಪರ್ಧಿಗಳಾಗಿ ಆಯ್ಕೆಯಾಗಿದ್ದರು. ಟಾಸ್ಕ್‌ನಲ್ಲಿ ಬಿಗ್ ಬಾಸ್ ನೀಡಿದ ನಿಯಮಗಳ ಪ್ರಕಾರ, ಸ್ಪರ್ಧಿಗಳು ಒಂದೊಂದು ಬಟ್ಟಲಿಗೆ ನೀರು ತುಂಬಿ, ಇತರರ ಬುಟ್ಟಿಗೆ ಹಾಕುವ ಮೂಲಕ ಅವರನ್ನು ಔಟ್ ಮಾಡಬೇಕಿತ್ತು. ಸ್ಪರ್ಧಿಗಳು ಪ್ಲಾನ್​ ಮಾಡಿದ ಪರಿಣಾಮ, ಧನರಾಜ್ ಆಚಾರ್ಯ ಅವರ ಬುಟ್ಟಿಗೆ ನೀರು ಹಾಕದೇ ಬಿಡಲಾಯಿತು. ಇದು ಅವರಿಗೆ ಗೆಲುವಿನ ದಾರಿ ಮಾಡಿ ಕೊಟ್ಟಿದ್ದು, ಈ ವಾರದ ಬಿಗ್ ಬಾಸ್ ಮನೆಯ ಕ್ಯಾಪ್ಟನ್​ ಸ್ಥಾನವನ್ನು ಧನರಾಜ್ ಆಚಾರ್ಯ ತಮ್ಮದಾಗಿ ಮಾಡಿಕೊಂಡಿದ್ದಾರೆ. ಈ ಗೆಲುವು ಧನರಾಜ್‌ಗೆ ಶೋನಲ್ಲಿ ಮತ್ತಷ್ಟು ಪ್ರಾಬಲ್ಯ ತರಲಿದೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.